Author of the Year 2022 - Kannada

ಪ್ರಶಸ್ತಿಗಳು:

'ಸ್ಟೋರಿಮಿರರ್ ಆಥರ್ ಆಫ್ ದಿ ಇಯರ್ ಅವಾರ್ಡ್' ಎನ್ನುವುದು ಡಿಜಿಟಲ್ ಸಾಹಿತ್ಯ ಮತ್ತು ಪಬ್ಲಿಷಿಂಗ್‌ನ ಕ್ಷೇತ್ರದಲ್ಲಿ ಅತಿ ದೊಡ್ಡ ಪ್ರಶಸ್ತಿಯಾಗಿದೆ. ಇಲ್ಲಿ ನಾವು ಸಾಹಿತ್ಯ ಪ್ರಪಂಚದ ಕೆಲವು ಪ್ರತಿಭಾವಂತ ಬರಹಗಾರರ ಅದ್ಭುತ ಸಾಧನೆಗಳನ್ನು ಸಂಭ್ರಮಿಸುತ್ತೇವೆ. ಈ ವ್ಯಕ್ತಿಗಳು ತಮ್ಮ ಅದ್ಭುತ ಪದಗಳಿಂದ ಓದುಗರನ್ನು ತಮ್ಮತ್ತ ಸೆಳೆದಿದ್ದಾರೆ ಮತ್ತು ತಮ್ಮ ನಿರಂತರ ಬರಹಗಳ ಮೂಲಕ ಸಾಹಿತ್ಯ ಲೋಕದಲ್ಲಿ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

ಸ್ಟೋರಿಮಿರರ್ ಅಂತಹ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವ ಗುರಿಯನ್ನು ಹೊಂದಿದೆ. ಅಲ್ಲದೇ ಈ ವೇದಿಕೆಯು ಹೆಚ್ಚಿನ ಜನರನ್ನು ಬರೆಯಲು ಮತ್ತು ಅವರ ಸಾಧನೆಗಳನ್ನು ಜಗತ್ತಿಗೆ ತೋರಿಸಲು ಪ್ರೇರೇಪಿಸುತ್ತದೆ.

'ಸ್ಟೋರಿಮಿರರ್ ಆಥರ್ ಆಫ್ ದಿ ಇಯರ್ : 2022' ಪ್ರಶಸ್ತಿಯ 5 ನೇ ಆವೃತ್ತಿಯನ್ನು ಪ್ರಸ್ತುತಪಡಿಸಲು ನಾವು ಹೆಮ್ಮೆಪಡುತ್ತೇವೆ.

ಅಷ್ಟೇ ಅಲ್ಲ, ಇನ್ನೂ ತುಂಬಾ ಇವೆ. 'ಸ್ಟೋರಿಮಿರರ್ ಆಥರ್ ಆಫ್ ದಿ ಇಯರ್ 2022' ಪ್ರಶಸ್ತಿಯ ವಿಜೇತರನ್ನು ಗುರುತಿಸುವುದರ ಜೊತೆಗೆ, ಅವರನ್ನು ಭೌತಿಕ ಸಮಾರಂಭದಲ್ಲಿ ಸಂಭ್ರಮಿಸಲಾಗುವುದು. ಇದು ಈ ಪ್ರಶಸ್ತಿಯ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. (ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ)

ಪ್ರಶಸ್ತಿ ವಿಭಾಗಗಳು:

ಈ ಪ್ರಶಸ್ತಿಗಳನ್ನು ಎರಡು ವಿಭಾಗಗಳಲ್ಲಿ, 10 ವಿವಿಧ ಭಾಷೆಗಳಲ್ಲಿ ಈ ಕೆಳಗಿನಂತೆ  ನೀಡಲಾಗುತ್ತದೆ:

'ಆಥರ್ ಆಫ್ ದಿ ಇಯರ್' - 2022 (ಓದುಗರ ಆಯ್ಕೆ - ರೀಡರ್ಸ್ ಚಾಯ್ಸ್) : ಈ ವಿಭಾಗದಿಂದ  'ಆಥರ್ ಆಫ್ ದಿ ವೀಕ್'ನ ವಿಜೇತರು, ಸ್ಪರ್ಧೆಗಳ ವಿಜೇತರು ಮತ್ತು ವರ್ಷದಲ್ಲಿ ಉತ್ತಮ ಬರವಣಿಗೆ ಕೌಶಲ್ಯವನ್ನು ಪ್ರದರ್ಶಿಸಿದ ಇತರ ಕೆಲವು ಬರಹಗಾರರನ್ನು ನಾಮನಿರ್ದೇಶನ (ನಾಮಿನೇಟ್) ಮಾಡಲಾಗುತ್ತದೆ. ಒಟ್ಟಾರೆಯಾಗಿ, ಸ್ಟೋರಿಮಿರರ್‌ನಲ್ಲಿ ಬರೆದ ಒಟ್ಟು ಬರಹಗಾರರಲ್ಲಿ 2% ಕ್ಕಿಂತ ಕಡಿಮೆ ಜನರು ನಾಮನಿರ್ದೇಶನಗೊಂಡಿದ್ದಾರೆ. ಅವರು ಸ್ವೀಕರಿಸಿದ ಕ್ಲ್ಯಾಪ್‌ಗಳ ಸಂಖ್ಯೆಯ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.

'ಆಥರ್ ಆಫ್ ದಿ ಇಯರ್' - 2022 (ಸಂಪಾದಕರ ಆಯ್ಕೆ - ಎಡಿಟರ್ಸ್ ಚಾಯ್ಸ್) : ಸ್ಟೋರಿಮಿರರ್‌ನಲ್ಲಿ ಅಸಾಧಾರಣ ಬರಹಗಳನ್ನು ನಿರಂತರವಾಗಿ ಪ್ರಕಟಿಸಿದ ಬರಹಗಾರರನ್ನು, ಈ ವಿಭಾಗದಿಂದ ನಾಮನಿರ್ದೇಶನ ಮಾಡಲಾಗುತ್ತದೆ. ವಿಜೇತರನ್ನು ಶ್ರೀ ಬಿಭು ದತ್ತಾ ರೌತ್ (ಸಿಇಒ - ಸ್ಟೋರಿಮಿರರ್) ಮತ್ತು ಶ್ರೀಮತಿ ದಿವ್ಯಾ ಮಿರ್ಚಂದಾನಿ (ಮುಖ್ಯ ಸಂಪಾದಕರು - ಸ್ಟೋರಿಮಿರರ್) ಈ ತೀರ್ಪುಗಾರರನ್ನು ಒಳಗೊಂಡಂತೆ, ಸ್ಟೋರಿಮಿರರ್ ಸಂಪಾದಕೀಯ ತಂಡವು  ನಿರ್ಧರಿಸುತ್ತದೆ.

ಜನೇವರಿ 01, 2022 ರಿಂದ ಡಿಸೆಂಬರ್ 31, 2022 ರ ಅವಧಿಯಲ್ಲಿ, ಸ್ಟೋರಿಮಿರರ್‌ನಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದ ಬರಹಗಾರರನ್ನು 'ಆಥರ್ ಆಫ್ ದಿ ಇಯರ್ - 2022' ಎಂದು ಪರಿಗಣಿಸಲಾಗುತ್ತದೆ.

ಬಹುಮಾನಗಳು:

ವಿಜೇತರಿಗೆ ಈ ಕೆಳಗಿನ ಬಹುಮಾನಗಳನ್ನು ನೀಡಲಾಗುವುದು

  • ಪ್ರತಿ ಭಾಷೆಯ ಅಗ್ರ ವಿಜೇತರು (ಓದುಗರ ಆಯ್ಕೆ ಮತ್ತು ಸಂಪಾದಕರ ಆಯ್ಕೆ) ವಿಜೇತ ಪ್ರಮಾಣಪತ್ರವನ್ನು ಹಾಗೂ 'ವಿನ್ನರ್: ಆಥರ್ ಆಫ್ ದಿ ಇಯರ್- 2022' ಟ್ರೋಫಿಯನ್ನು ಪಡೆಯಲಿದ್ದಾರೆ 
  • ಪ್ರತಿ ಭಾಷೆಯ 1 ನೇ ರನ್ನರ್ ಅಪ್ ಆದವರು (ಓದುಗರ ಆಯ್ಕೆ ಮತ್ತು ಸಂಪಾದಕರ ಆಯ್ಕೆ) 1ನೇ ರನ್ನರ್ ಅಪ್ ಪ್ರಮಾಣಪತ್ರವನ್ನು ಹಾಗೂ 'ಫರ್ಸ್ಟ್ ರನ್ನರ್ ಅಪ್: ಆಥರ್ ಆಫ್ ದಿ ಇಯರ್- 2022' ಟ್ರೋಫಿಯನ್ನು ಪಡೆಯಲಿದ್ದಾರೆ.
  • ಪ್ರತಿ ಭಾಷೆಯ 2 ನೇ ರನ್ನರ್ ಅಪ್ ಆದವರು (ಓದುಗರ ಮತ್ತು ಸಂಪಾದಕರ ಆಯ್ಕೆ) 2 ನೇ ರನ್ನರ್ ಅಪ್ ಪ್ರಮಾಣಪತ್ರವನ್ನು ಹಾಗೂ 'ಸೆಕೆಂಡ್ ರನ್ನರ್ ಅಪ್: ಆಥರ್ ಆಫ್ ದಿ ಇಯರ್- 2022' ಟ್ರೋಫಿಯನ್ನು ಪಡೆಯಲಿದ್ದಾರೆ.
  • ಪ್ರತಿ ಭಾಷೆಯ ಟಾಪ್ 5 ವಿಜೇತರು (ಓದುಗರ ಮತ್ತು ಸಂಪಾದಕರ ಆಯ್ಕೆ) ಸ್ಟೋರಿಮಿರರ್‌ನಿಂದ ತಮ್ಮ ಇ-ಪುಸ್ತಕವನ್ನು ಉಚಿತವಾಗಿ ಪ್ರಕಟಿಸುವ ಅವಕಾಶವನ್ನು ಪಡೆಯಲಿದ್ದಾರೆ.
  • ಟಾಪ್ 10 (ಓದುಗರ ಆಯ್ಕೆ) ಮತ್ತು ಟಾಪ್ 10 (ಸಂಪಾದಕರ ಆಯ್ಕೆ) ಸ್ಟೋರಿಮಿರರ್‌ನಿಂದ ಉಚಿತ ಪುಸ್ತಕವನ್ನು ಪಡೆಯುತ್ತಾರೆ. ಭೌತಿಕ ಪ್ರಮಾಣಪತ್ರ ಮತ್ತು ಕನಿಷ್ಠ ಅರ್ಹತಾ ಮಾನದಂಡಗಳಿಗೆ ಒಳಪಟ್ಟು ಸ್ಟೋರಿಮಿರರ್ ಪುಸ್ತಕ ಪ್ರಕಾಶನ ಪ್ಯಾಕೇಜ್‌ಗಳಲ್ಲಿ 40% ರಿಯಾಯಿತಿಯನ್ನು ಪಡೆಯಲಿದ್ದಾರೆ.
  • 100ಕ್ಕೂ ಅಧಿಕ ಕ್ಲ್ಯಾಪ್‌ಗಳನ್ನು ಪಡೆಯುವ ಬರಹಗಾರರಿಗೆ, ಸ್ಟೋರಿಮಿರರ್‌ನಿಂದ ಪುಸ್ತಕಗಳನ್ನು ಖರೀದಿಸಲು ₹500 ಮೌಲ್ಯದ ಡಿಸ್ಕೌಂಟ್ ಕೂಪನ್ ಅನ್ನು ನೀಡಲಾಗುವುದು.
  • 50ಕ್ಕೂ ಅಧಿಕ ಕ್ಲ್ಯಾಪ್‌ಗಳನ್ನು ಪಡೆಯುವ ಬರಹಗಾರರಿಗೆ, ಸ್ಟೋರಿಮಿರರ್‌ನಿಂದ ಪುಸ್ತಕಗಳನ್ನು ಖರೀದಿಸಲು ₹250 ಮೌಲ್ಯದ ಡಿಸ್ಕೌಂಟ್ ಕೂಪನ್ ಅನ್ನು ನೀಡಲಾಗುವುದು.
  • ಎಲ್ಲಾ ನಾಮಿನಿಗಳು ಸ್ಟೋರಿಮಿರರ್‌ನಿಂದ ಪುಸ್ತಕಗಳನ್ನು ಖರೀದಿಸಲು, ₹149 ಮೌಲ್ಯದ ಡಿಸ್ಕೌಂಟ್ ಕೂಪನ್ ಅನ್ನು ಮತ್ತು ಡಿಜಿಟಲ್ ಪ್ರಮಾಣಪತ್ರವನ್ನು ಪಡೆಯಲಿದ್ದಾರೆ.

ಮೆಗಾ ಬಹುಮಾನ:

ಗರಿಷ್ಠ ಚಪ್ಪಾಳೆಗಳನ್ನು (ಕ್ಲ್ಯಾಪ್‌ಗಳು) ಹೊಂದಿರುವ ಒಬ್ಬ ಬರಹಗಾರ, ಸ್ಟೋರಿಮಿರರ್‌ನೊಂದಿಗೆ ಉಚಿತ ಭೌತಿಕ ಪುಸ್ತಕ ಪ್ರಕಾಶನ ಒಪ್ಪಂದಕ್ಕೆ ಅರ್ಹರಾಗಿರುತ್ತಾರೆ.

ವಾರದ ವಿಜೇತರು:

ಎಲ್ಲಾ ಭಾಷೆಗಳಲ್ಲಿ, ವಾರದ ಗರಿಷ್ಠ ಕ್ಲ್ಯಾಪ್‌ಗಳನ್ನು ಹೊಂದಿರುವ ಮೂವರು ಬರಹಗಾರರು ಸ್ಟೋರಿಮಿರರ್‌ನಿಂದ ₹300 ಮೌಲ್ಯದ ಉಚಿತ ಪುಸ್ತಕಗಳನ್ನು ಪಡೆಯಲಿದ್ದಾರೆ. ವಾರಗಳನ್ನು ಜನೇವರಿ 1-7, ಜನೇವರಿ 8-14, ಜನೇವರಿ 15-21 ಮತ್ತು ಜನೇವರಿ 22-28 ಎಂದು ಗಣನೆಗೆ ತೆಗೆದುಕೊಳ್ಳಲಾಗುವುದು.

ವಿಶೇಷ ಪ್ರಶಸ್ತಿಗಳು:

ಈ ಕೆಳಗಿನ ಪ್ರತಿಯೊಬ್ಬ ವಿಜೇತರಿಗೆ ಮೆಡಲ್ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು:

  1. ವರ್ಷದ ಅತ್ಯಂತ ಸ್ಥಿರವಾದ ಬರಹಗಾರ - 2022 ರ ಪ್ರತಿ ತಿಂಗಳು (ಜನೇವರಿ-ಡಿಸೆಂಬರ್) ಗರಿಷ್ಠ ಬರಹಗಳನ್ನು (ಕಥೆ, ಕವಿತೆ ಮತ್ತು ಆಡಿಯೋ) ಸಲ್ಲಿಸಿದ ಬರಹಗಾರ.
  2. ವರ್ಷದ ಅತ್ಯಂತ ಸಮೃದ್ಧ ಬರಹಗಾರ - 2022 ರಲ್ಲಿ ಗರಿಷ್ಠ ಬರಹಗಳನ್ನು (ಕಥೆ, ಕವಿತೆ ಮತ್ತು ಆಡಿಯೋ) ಸಲ್ಲಿಸಿದ ಬರಹಗಾರ.
  3. ವರ್ಷದ ಕವಿ - 2022 ರಲ್ಲಿ ಪ್ರಕಟವಾದ ಕನಿಷ್ಠ 25 ಕವನಗಳಿಗೆ ಒಳಪಟ್ಟು, ವರ್ಷದಲ್ಲಿ ಪ್ರಕಟವಾದ ಎಲ್ಲಾ ಕವಿತೆಗಳನ್ನು ಸೇರಿ, ಅತ್ಯಧಿಕ ಸರಾಸರಿ ಸಂಪಾದಕೀಯ (ಎಡಿಟೋರಿಯಲ್) ಸ್ಕೋರ್‌ಗಳನ್ನು ಗಳಿಸಿದ ಕವಿ.
  4. ವರ್ಷದ ಕಥೆಗಾರ - 2022 ರಲ್ಲಿ ಪ್ರಕಟವಾದ ಕನಿಷ್ಠ 15 ಕಥೆಗಳಿಗೆ ಒಳಪಟ್ಟು, ವರ್ಷದಲ್ಲಿ ಪ್ರಕಟವಾದ ಎಲ್ಲಾ ಕಥೆಗಳನ್ನು ಸೇರಿ, ಅತ್ಯಧಿಕ ಸರಾಸರಿ ಸಂಪಾದಕೀಯ (ಎಡಿಟೋರಿಯಲ್) ಸ್ಕೋರ್‌ಗಳನ್ನು ಗಳಿಸಿದ ಬರಹಗಾರ.
  5. ವರ್ಷದ ನಿರೂಪಕ - ವರ್ಷದಲ್ಲಿ ಪ್ರಕಟವಾದ ಕನಿಷ್ಠ 5 ಆಡಿಯೊ ವಿಷಯಗಳಿಗೆ ಒಳಪಟ್ಟು, ವರ್ಷದಲ್ಲಿ ಪ್ರಕಟವಾದ ಎಲ್ಲಾ ಆಡಿಯೊಗಳ ಮೇಲೆ ಅತ್ಯಧಿಕ ಸರಾಸರಿ ಸಂಪಾದಕೀಯ (ಎಡಿಟೋರಿಯಲ್) ಸ್ಕೋರ್‌ಗಳನ್ನು ಗಳಿಸಿದ ನಿರೂಪಕರು. 
  6. ವರ್ಷದ ಕೋಟರ್ - ವರ್ಷದಲ್ಲಿ ಪ್ರಕಟಿಸಲಾದ ಕನಿಷ್ಠ 100 ಕೋಟ್‌ಗಳಿಗೆ ಒಳಪಟ್ಟು, ವರ್ಷದಲ್ಲಿ ಗರಿಷ್ಠ ಸಂಖ್ಯೆಯ ಕೋಟ್‌ಗಳನ್ನು ಪ್ರಕಟಿಸಿದ ಕೋಟರ್‌ನನ್ನು  ಸಂಪಾದಕೀಯ ತಂಡದಿಂದ ಆಯ್ಕೆಮಾಡಲಾಗುವುದು.
  7. ವರ್ಷದ ಉದಯೋನ್ಮುಖ ಬರಹಗಾರ - 2022 ರಲ್ಲಿ ಸ್ಟೋರಿಮಿರರ್‌ನಲ್ಲಿ ಬರೆಯಲು ಪ್ರಾರಂಭಿಸಿದ ಮತ್ತು ವರ್ಷದಲ್ಲಿ ಪ್ರಕಟವಾದ ಕನಿಷ್ಠ 25 ಬರಹಗಳಿಗೆ ಒಳಪಟ್ಟು, ಅತ್ಯಧಿಕ ಸರಾಸರಿ ಸಂಪಾದಕೀಯ (ಎಡಿಟೋರಿಯಲ್) ಸ್ಕೋರ್‌ಗಳನ್ನು ಗಳಿಸಿದ ಬರಹಗಾರ.

ನಿಯಮಗಳು / ನಿಯಮಗಳು ಮತ್ತು ಷರತ್ತುಗಳು:

  • ಮೋಸದ ಮಾರ್ಗದಿಂದ ಕ್ಲ್ಯಾಪ್‌ಗಳನ್ನು ಪಡೆಯಲು ಪ್ರಯತ್ನಿಸಿ, ತಪ್ಪಿತಸ್ಥರೆಂದು ಕಂಡುಬಂದ ನಾಮನಿರ್ದೇಶಿತರನ್ನು (ನಾಮಿನಿಗಳು) ಗರಿಷ್ಠ ಕ್ಲ್ಯಾಪ್‌ಗಳನ್ನು ಪಡೆದ ನಂತರವೂ ಅನರ್ಹಗೊಳಿಸಲಾಗುವುದು. ಇದು ನಕಲಿ ಐಡಿಗಳು, ತಾತ್ಕಾಲಿಕ ಮೇಲ್ ಐಡಿಗಳು, ಇತ್ಯಾದಿಗಳಿಂದ ಸ್ವೀಕರಿಸಲ್ಪಟ್ಟ ಕ್ಲ್ಯಾಪ್‌ಗಳನ್ನು ಒಳಗೊಂಡಿರುತ್ತದೆ. ಸ್ಟೋರಿಮಿರರ್ ಎಲ್ಲಾ ಕ್ಲ್ಯಾಪ್‌ಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರುತ್ತದೆ.  ಮತ್ತು ಅಂತಹ ಎಲ್ಲಾ ಕ್ಲ್ಯಾಪ್‌ಗಳನ್ನು, ಆಯಾ ಕ್ಲ್ಯಾಪ್ಸ್ ಎಣಿಕೆಗಳಿಂದ ರದ್ದುಗೊಳಿಸುತ್ತದೆ. ಅಲ್ಲದೆ, ಸ್ಟೋರಿಮಿರರ್ ಅಂತಹ ಲೇಖಕರನ್ನು ಎಂದಿಗೂ ಪ್ರಮೋಟ್ ಮಾಡುವುದಿಲ್ಲ.
  • ಇ-ಪುಸ್ತಕ / ಪೇಪರ್‌ಬ್ಯಾಕ್ ಪುಸ್ತಕ ಪ್ರಕಾಶನವು, ಸ್ಟೋರಿಮಿರರ್ ನಿಗದಿಪಡಿಸಿದ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಪೂರೈಸಬೇಕು.
  • ವಿಜೇತರನ್ನು ನಿರ್ಧರಿಸುವಲ್ಲಿ ಸ್ಟೋರಿಮಿರರ್‌ನ ನಿರ್ಧಾರವೇ ಅಂತಿಮವಾಗಿರುತ್ತದೆ ಮತ್ತು  ವೇದಿಕೆಯು ತನ್ನ ನಿರ್ಧಾರಕ್ಕೆ ಬದ್ಧವಾಗಿರುತ್ತದೆ.
  • ಸ್ಟೋರಿಮಿರರ್ ತನ್ನ ಸ್ವಂತ ವಿವೇಚನೆಯ ಆಧಾರದ ಮೇಲೆ, ಪ್ರಶಸ್ತಿ ಸಮಾರಂಭದ ವಿಧಾನವನ್ನು ಆಯ್ಕೆ ಮಾಡುವ ಹಕ್ಕನ್ನು ಕಾಯ್ದಿರಿಸಿದೆ.


Ashwini Desai
[ YEAR 2022 ]
| 3


Login to Clap

B K Hema
[ YEAR 2022 ]
| 17


Login to Clap

JAISHREE HALLUR
[ YEAR 2022 ]
| 32


Login to Clap

kaveri p u
[ YEAR 2022 ]
| 2


Login to Clap

Kavya Poojary
[ YEAR 2022 ]
| 2


Login to Clap

Raghavendra S S
[ YEAR 2022 ]
| 21


Login to Clap

Ramesh gundmi
[ YEAR 2022 ]
| 1


Login to Clap

Ranjitha M
[ YEAR 2022 ]
| 1


Login to Clap

Revati Patil
[ YEAR 2022 ]
| 3


Login to Clap

Shilpashree NP
[ YEAR 2022 ]
| 13


Login to Clap

ShreDo ✏️
[ YEAR 2022 ]
| 1


Login to Clap

shristi Jat
[ YEAR 2022 ]
| 7


Login to Clap

Shwetha S. K
[ YEAR 2022 ]
| 1


Login to Clap

Surabhi Latha
[ YEAR 2022 ]
| 2


Login to Clap

Vaman Acharya
[ YEAR 2022 ]
| 50


Login to Clap